ಪವಿತ್ರ ಕುರ್‌ಆನ್
ಪವಿತ್ರ ಕುರ್‌ಆನ್, ಸರ್ವಶಕ್ತನಾದ ಅಲ್ಲಾಹನ ವಾಣಿಯಾಗಿದೆ. ಇದನ್ನು ತನ್ನ ಪ್ರವಾದಿ ಮುಹಮ್ಮದ್ ﷺ ಅವರ ಮೇಲೆ ಅವತೀರ್ಣಗೊಳಿಸಲಾಗಿದೆ. ಇದು ಮುಸ್ಲಿಮರ ಸಂವಿಧಾನ, ಅವರ ಪಾಲಿಗೆ ಪ್ರಮಾಣ ಮತ್ತು ಮಾರ್ಗದರ್ಶನದ ಮೂಲವಾಗಿದೆ. ಇದು ಅರೇಬಿಕ್ ಭಾಷೆಯಲ್ಲಿ ಇಪ್ಪತ್ಮೂರು ವರ್ಷಗಳ ಅವಧಿಯಲ್ಲಿ ಹಂತಹಂತವಾಗಿ ಅವತೀರ್ಣಗೊಂಡಿತು. ಇಂದು ಜಗತ್ತಿನಾದ್ಯಂತ ಲಕ್ಷಾಂತರ ಜನರ ಹೃದಯಗಳಲ್ಲಿ ಮತ್ತು ಗ್ರಂಥದ ಪುಟಗಳಲ್ಲಿ ಇದರ ಮೂಲ ಪಠ್ಯವು ಸಂಪೂರ್ಣವಾಗಿ ಸಂರಕ್ಷಿಸಲ್ಪಟ್ಟಿದೆ.
ಪವಿತ್ರ ಕುರ್‌ಆನ್, ಪ್ರವಾದಿ ಮುಹಮ್ಮದ್ ﷺ ಅವರ ಒಂದು ಶಾಶ್ವತ ಪವಾಡವಾಗಿದೆ. ಅಲ್ಲಾಹನು ಇದರ ಮೂಲಕ ಮಾನವರು ಮತ್ತು ಜಿನ್‌ಗಳಿಗೆ ಇದರಂತಹುದೇ ಒಂದು ಗ್ರಂಥವನ್ನು ತರಲು ಸವಾಲು ಹಾಕಿದ್ದಾನೆ. ಆದರೆ ಅವರು ವಿಫಲರಾಗಿದ್ದಾರೆ ಮತ್ತು ಈ ಸವಾಲು ಇಂದಿಗೂ ಮುಕ್ತವಾಗಿದೆ. ಇದರ ಪವಾಡ ಕೇವಲ ಸಾಹಿತ್ಯಿಕ ಶ್ರೇಷ್ಠತೆ ಅಥವಾ ಅಗೋಚರ ವಿಷಯಗಳ ಕುರಿತಾದ ಮುನ್ಸೂಚನೆಗಳಿಗೆ ಸೀಮಿತವಾಗಿಲ್ಲ. ಬದಲಾಗಿ, ಅದರ ರಚನೆ, ಶಾಸನಗಳು, ಮತ್ತು ಪ್ರತಿಯೊಂದು ಕಾಲದ ವಿದ್ವಾಂಸರು ಮಾತ್ರ ಗ್ರಹಿಸಬಲ್ಲ ವೈಜ್ಞಾನಿಕ ಸಂಕೇತಗಳನ್ನೊಳಗೊಂಡ ಒಂದು ಪರಿಪೂರ್ಣ ಪವಾಡವಾಗಿದೆ.
ಕುರ್‌ಆನ್ ಯಾವುದೇ ಮಾನವನ ರಚನೆಯಲ್ಲ. ಹಾಗಿದ್ದರೆ, ನಾಗರಿಕತೆ ಮತ್ತು ಜ್ಞಾನದ ಕೇಂದ್ರಗಳಿಂದ ದೂರವಿದ್ದ ಮರುಭೂಮಿ ಪರಿಸರದಲ್ಲಿ ಬೆಳೆದ ಒಬ್ಬ ನಿರಕ್ಷರ ವ್ಯಕ್ತಿಗೆ, ಅತ್ಯುನ್ನತ ಕಾನೂನುಗಳು ಮತ್ತು ಆಳವಾದ ಸತ್ಯಗಳನ್ನು ಒಳಗೊಂಡ ಇಂತಹ ಒಂದು ಗ್ರಂಥವನ್ನು ರಚಿಸಲು ಹೇಗೆ ಸಾಧ್ಯ? ಚರಿತ್ರೆಯಲ್ಲಿನ ಮೇಧಾವಿಗಳು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿರಬಹುದು, ಆದರೆ ಅವರ ಜ್ಞಾನಕ್ಕೆ ಮಿತಿಗಳಿವೆ. ಆದರೆ ಕುರ್‌ಆನ್, ಎಂದಿಗೂ ಬತ್ತದ ಜ್ಞಾನದ ಚಿಲುಮೆಯಾಗಿದೆ. ಪ್ರತಿಯೊಬ್ಬ ವಿದ್ವಾಂಸನು ತನ್ನ ಅಧ್ಯಯನಕ್ಕೆ ಪೂರಕವಾದ ವಿಷಯಗಳನ್ನು ಇದರಲ್ಲಿ ಕಂಡುಕೊಳ್ಳುತ್ತಾನೆ. ಇದು, ಕುರ್‌ಆನ್ ಜ್ಞಾನವಂತನಾದ ಸೃಷ್ಟಿಕರ್ತನಿಂದಲೇ ಅವತೀರ್ಣಗೊಂಡಿದೆ ಎಂಬುದಕ್ಕೆ ಸ್ಪಷ್ಟ ಪುರಾವೆಯಾಗಿದೆ.
ಮುಸ್ಲಿಮರು, ಅಲ್ಲಾಹನು ಈ ಹಿಂದೆ ಅವತೀರ್ಣಗೊಳಿಸಿದ ದೈವಿಕ ಗ್ರಂಥಗಳಲ್ಲಿ ನಂಬಿಕೆಯಿಡುತ್ತಾರೆ. ಉದಾಹರಣೆಗೆ ಇಬ್ರಾಹೀಮ್ ಮತ್ತು ಮೂಸಾ ಅವರ ಏಡುಗಳು, ದಾವೂದ್ ಅವರ ಝಬೂರ್ (ಕೀರ್ತನೆಗಳು) ಮತ್ತು ಈಸಾ ಅವರ ಇಂಜೀಲ್ (ಸುವಾರ್ತೆ). ಆದರೆ, ಕುರ್‌ಆನ್ ಈ ಹಿಂದಿನ ಎಲ್ಲಾ ಗ್ರಂಥಗಳ ಮೇಲೆ ನಿರ್ಣಾಯಕ ಸ್ಥಾನವನ್ನು ಹೊಂದಿದೆ. ಆ ಗ್ರಂಥಗಳಲ್ಲಿ ಕುರ್‌ಆನ್‌ಗೆ ಸಮ್ಮತವಾಗಿರುವ ಅಂಶಗಳು ಮಾತ್ರ ಸತ್ಯವೆಂದು ಪರಿಗಣಿಸಲಾಗುತ್ತದೆ ಮತ್ತು ಅದಕ್ಕೆ ವಿರುದ್ಧವಾದವುಗಳು ತಿರುಚಲ್ಪಟ್ಟಿವೆ ಎಂದು ತಿಳಿಯಲಾಗುತ್ತದೆ. ನಾವು ಎಲ್ಲಾ ಪ್ರವಾದಿಗಳನ್ನು ಗೌರವಿಸುತ್ತೇವೆ ಮತ್ತು ಅವರ ಸಂದೇಶಗಳನ್ನು ಮನ್ನಿಸುತ್ತೇವೆ, ಆದರೆ ನಾವು ಪವಿತ್ರ ಕುರ್‌ಆನ್‌ಅನ್ನೇ ಅನುಸರಿಸುತ್ತೇವೆ. ಏಕೆಂದರೆ ಅದು ಸತ್ಯಾಸತ್ಯತೆಗಳನ್ನು ಅಳೆಯುವ ಅಂತಿಮ ಮಾನದಂಡವಾಗಿದೆ ಮತ್ತು ಅಲ್ಲಾಹನ ಮಾರ್ಗದಲ್ಲಿ ಸ್ಥಿರವಾಗಿ ಸಾಗಲು ನಮಗೆ ದಾರಿ ತೋರಿಸುತ್ತದೆ.
القرآن الكريم هو كلام الله تعالى المنزَّل على نبيه محمد ﷺ، وهو دستور المسلمين وحجتهم ومصدر هدايتهم. نزل بالعربية على مدى ثلاثة وعشرين عامًا، ويُحفظ نصّه كاملًا في صدور الحفاظ وبين دفتي المصاحف في كل بقاع الأرض.
القرآن الكريم هو المعجزة الخالدة للنبي محمد ﷺ، وهو كلام الله الذي تحدى به الإنس والجن أن يأتوا بمثله فعجزوا، ولا يزال التحدي قائماً. ومصدر إعجازه ليس جانباً واحداً كالبلاغة أو الإخبار بالمغيبات فحسب، بل هو إعجاز كلي في نظمه وتشريعه وما يحويه من إشارات علمية لا يدركها إلا الدارس المتفحص في كل عصر.
لم يكن القرآن من تأليف بشر، فكيف يتسنى لرجل أمي نشأ في بيئة صحراوية منعزلة عن مراكز الحضارة وفلسفات الأمم أن يأتي بكتاب يحوي أرقى التشريعات وأعمق الحقائق؟ إن العباقرة في التاريخ قد يبدعون في فنونهم، لكن سبقهم له حدود، بينما القرآن يظل معيناً لا ينضب، يجد فيه كل عالم وأديب ما يوافق تخصصه ودليلاً على أنه تنزيل من حكيم خبير.
يؤمن المسلمون بكتب الله المنزلة، كصحف إبراهيم وموسى، وزبور داود، وإنجيل عيسى عليهم السلام، ولكن القرآن هو المهيمن على تلك الكتب؛ فما وافقه منها فهو الحق الثابت، وما خالفه فهو مما دخله التحريف. نحن نحترم جميع الأنبياء ونقدر رسالاتهم، لكننا نتبع القرآن الكريم بصفته الميزان الذي نزن به الأخبار ونستقيم به على منهج الله.