ಸಾಕ್ಷ್ಯವಚನ
ಸಾಕ್ಷ್ಯವಚನವು ಇಸ್ಲಾಮಿನ ಹೆಬ್ಬಾಗಿಲು. ಅದು ‘ಲಾ ಇಲಾಹ ಇಲ್ಲಲ್ಲಾಹ್, ಮುಹಮ್ಮದುರ್ ರಸೂಲುಲ್ಲಾಹ್’ ಎಂದು ಹೇಳುವುದಾಗಿದೆ. ಇದರರ್ಥ, ಸತ್ಯವಾಗಿ ಆರಾಧನೆಗೆ ಅರ್ಹನು ಅಲ್ಲಾಹನೊಬ್ಬನೇ, ಅವನಿಗೆ ಯಾರೂ ಪಾಲುದಾರರಿಲ್ಲ ಮತ್ತು ಮುಹಮ್ಮದ್ ﷺ ಅವರು ಆತನ ದಾಸ ಹಾಗೂ ಪ್ರವಾದಿ ಮತ್ತು ಪ್ರವಾದಿಗಳ ಸರಣಿಯಲ್ಲಿ ಅಂತಿಮರು.
ಈ ಎರಡು ಸಾಕ್ಷ್ಯವಚನಗಳು ಇಸ್ಲಾಮನ್ನು ಪ್ರವೇಶಿಸಲು ಮೊದಲ ಬಾಗಿಲಾಗಿವೆ. ಇದು ಒಬ್ಬ ವಿಶ್ವಾಸಿಯು ತನ್ನ ನಾಲಿಗೆಯಿಂದ ಘೋಷಿಸುವುದು ಮತ್ತು ತನ್ನ ಹೃದಯದಿಂದ ಅಲ್ಲಾಹನಲ್ಲದೆ ಬೇರೆ ಆರಾಧ್ಯರಿಲ್ಲ ಹಾಗೂ ಮುಹಮ್ಮದ್ ﷺ ಅವರು ಆತನ ಸಂದೇಶವಾಹಕರು ಎಂಬುದನ್ನು ದೃಢೀಕರಿಸುವುದಾಗಿದೆ. ಈ ಒಪ್ಪಿಗೆ ಕೇವಲ ಬಾಯಿಮಾತಿನದ್ದಲ್ಲ, ಬದಲಾಗಿ ಇದು ಒಂದು ದೃಢವಾದ ಒಡಂಬಡಿಕೆಯಾಗಿದೆ. ಈ ಮೂಲಕ ಮುಸ್ಲಿಮನು ತನ್ನ ಆರಾಧನೆ ಮತ್ತು ವಿಧೇಯತೆಯಲ್ಲಿ ಅಲ್ಲಾಹನೊಬ್ಬನನ್ನೇ ಏಕಮಾತ್ರನಾಗಿ ಸ್ವೀಕರಿಸುತ್ತಾನೆ ಮತ್ತು ಲಾಭ-ನಷ್ಟವನ್ನುಂಟುಮಾಡಬಲ್ಲವು ಎಂದು ಭ್ರಮಿಸಲಾದ ಇತರ ಎಲ್ಲ ಮಿಥ್ಯಾ ಆರಾಧ್ಯರನ್ನು ತ್ಯಜಿಸುತ್ತಾನೆ.
ತೌಹೀದ್‌ನ (ಏಕದೇವತ್ವದ) ಅರ್ಥವೇನೆಂದರೆ, ಮನುಷ್ಯನು ಅಲ್ಲಾಹನ ಆಧಿಪತ್ಯದಲ್ಲಾಗಲಿ ಅಥವಾ ಆತನ ಶಾಸನಗಳಲ್ಲಾಗಲಿ ಯಾರನ್ನೂ ಪಾಲುದಾರನನ್ನಾಗಿ ಮಾಡಬಾರದು. ಅಲ್ಲಾಹನೇ ಎಲ್ಲದರ ಸೃಷ್ಟಿಕರ್ತನೂ ಮತ್ತು ಈ ವಿಶ್ವದ ಮಾಲಿಕನೂ ಆಗಿರುವ ಕಾರಣ, ಆರಾಧನೆಗೆ ಅರ್ಹನು ಆತ ಒಬ್ಬನೇ. ಇದರ ಒಂದು ಅವಿಭಾಜ್ಯ ಅಂಗವಾಗಿ, ದಾಸನು ತನ್ನೆಲ್ಲಾ ವಿಷಯಗಳಲ್ಲಿ ತನ್ನ ಹೃದಯವನ್ನು ಅಲ್ಲಾಹನಿಗಾಗಿಯೇ ಮೀಸಲಿಡಬೇಕು. ಎಲ್ಲಾ ಪ್ರೀತಿಗಳಿಗಿಂತ ಮಿಗಿಲಾಗಿ ತನ್ನ ಪ್ರಭುವನ್ನು ಪ್ರೀತಿಸಬೇಕು. ತನ್ನ ಭಯ ಮತ್ತು ನಿರೀಕ್ಷೆಗಳನ್ನು ಆತನೊಬ್ಬನಿಗೇ ಸೀಮಿತಗೊಳಿಸಬೇಕು. ಸತ್ಯವಾಗಿ ಲಾಭ ಅಥವಾ ನಷ್ಟವನ್ನುಂಟುಮಾಡಲು ಸಮರ್ಥನು ಆ ಪಾವನನಾದ ಅಲ್ಲಾಹನೊಬ್ಬನೇ ಎಂದು ದೃಢವಾಗಿ ನಂಬಬೇಕು.
ಇಸ್ಲಾಂ ಕೇವಲ ತಾತ್ವಿಕ ನಂಬಿಕೆಗಳಿಗೆ ಸೀಮಿತವಾಗಿಲ್ಲ, ಬದಲಾಗಿ ಅದು ಮನುಷ್ಯನ ನಡವಳಿಕೆ ಮತ್ತು ಕಾರ್ಯಗಳನ್ನೂ ಒಳಗೊಂಡಿದೆ. ಒಬ್ಬ ಮುಸ್ಲಿಮನ ಪಾಲಿಗೆ ಆರಾಧನೆಯು ಬಹಳ ವಿಸ್ತಾರವಾದ ಅರ್ಥವನ್ನು ಹೊಂದಿದೆ. ಕಡ್ಡಾಯ ಕರ್ಮಗಳನ್ನು ನಿರ್ವಹಿಸುವುದರಿಂದ ಹಿಡಿದು, ಭೂಮಿಯಲ್ಲಿ ಒಳಿತನ್ನು ಸ್ಥಾಪಿಸುವವರೆಗೆ, ಅಲ್ಲಾಹನ ಸಂತುಷ್ಟಿಯನ್ನು ಬಯಸಿ ಮಾಡುವ ಪ್ರತಿಯೊಂದು ಉಪಯುಕ್ತ ಕಾರ್ಯವೂ ಆರಾಧನೆಯೇ ಆಗಿದೆ. ಈ ದೃಷ್ಟಿಕೋನವು ಒಬ್ಬ ವಿಶ್ವಾಸಿಯ ಸಂಪೂರ್ಣ ಜೀವನವನ್ನು ಒಂದು ಮಹೋನ್ನತ ಗುರಿಯತ್ತ ಕೊಂಡೊಯ್ಯುತ್ತದೆ. ಆ ಗುರಿಯೆಂದರೆ, ತನ್ನ ಸೃಷ್ಟಿಕರ್ತನನ್ನು ಸಂತೃಪ್ತಿಪಡಿಸುವುದು, ಆತನ ಆಜ್ಞೆಯಂತೆ ಕಾರ್ಯನಿರ್ವಹಿಸುವುದು ಮತ್ತು ಈ ವಿಶ್ವದಲ್ಲಿ ಅಲ್ಲಾಹನು ಒದಗಿಸಿರುವ ಧರ್ಮಸಮ್ಮತವಾದ ಸಾಧನಗಳನ್ನು ಬಳಸಿಕೊಳ್ಳುವುದು.
الشهادة هي بوابة الإسلام، وهي قول: «لا إله إلا الله محمد رسول الله». تعني أنه لا معبود بحق إلا الله وحده لا شريك له، وأن محمدًا صلى الله عليه وسلم عبده ورسوله وخاتم النبيين.
الشهادتان هما الباب الأول لدخول الإسلام، وهما إقرار بلسان المؤمن وتصديق بقلبه بأن لا إله إلا الله، وأن محمداً ﷺ هو رسوله. وهذا الإقرار ليس مجرد كلمات عابرة، بل هو ميثاق يلتزم فيه المسلم بتوحيد الله وحده في عبادته وطاعته، ونبذ كل ما سواه من المعبودات الباطلة التي قد تتوهم النفوس فيها النفع أو الضر.
إن معنى التوحيد يقتضي ألا يشرك الإنسان مع الله أحداً في سلطانه أو تشريعه. فكما أن الله هو الخالق لكل شيء والمالك لهذا الكون، فإنه وحده المستحق للعبادة. ومن لوازمه أن يخلص العبد قلبه لله في كل شؤونه، فيجعل حبه لربه فوق كل حب، ويجعل خوفه ورجاءه معلقاً به وحده، موقناً أنه لا نافع ولا ضار في الحقيقة إلا هو سبحانه.
لا يقف الإسلام عند حدود العقيدة النظرية، بل يمتد ليشمل سلوك الإنسان وعمله. فالعبادة عند المسلم تتسع لتشمل كل تصرف نافع يقوم به ابتغاء وجه الله، بدءاً من أداء الفرائض وصولاً إلى عمارة الأرض بالخير. إن هذا النهج يجعل حياة المؤمن كلها موجهة نحو الغاية العظمى، وهي إرضاء خالقه والعمل وفق أمره، مستعيناً بالوسائل المشروعة التي جعلها الله في هذا الكون.